ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು

ಝಾನ್ಸಿ ಲಕ್ಶ್ಮೀಬಾಯಿ ರಸ್ತೆ, ಮೈಸೂರು-570 005
ಪದವಿ ಮತ್ತು ಸ್ನಾತಕೋತ್ತರ ಕೇಂದ್ರ
NAAC 'B' ಗ್ರೇಡಿಂದ ಮಾನ್ಯತೆ ಪಡೆದಿದೆ

Maharani's Arts College For Women, Mysuru

J.L.B Road Mysuru 570 005
Undergraduate & Postgraduate Center
Accredited By NAAC 'B' Grade

Government of Karnataka

ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು

​ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು ಇದನ್ನು ಮಹಾರಾಜ ಚಾಮರಾಜೇಂದ್ರ ಒಡೆಯರ್ X ನ ಪತ್ನಿ ಕೆಂಪನಂಜಮ್ಮಣಿಯವರಿಗಾಗಿ ಮಹಾರಾಣಿ ಹುಡುಗಿಯರ ಶಾಲೆಯನ್ನು ಮೈಸೂರಲ್ಲಿ ಪ್ರಾರಂಭಿಸಲಾಯಿತು. ಬಾಲಕಿಯರ ಶಿಕ್ಷಣವನ್ನು ನೀಡುವ ದೃಷ್ಟಿಕೋನದಿಂದ ಅಮ್ಬಲ್ ನರಸಿಂಹ ಅಯ್ಯಂಗಾರ್ (ಅರಮನೆಯ ಬಕ್ಷಿ), ಎಂ. ವೆಂಕಟ ಕೃಷ್ಣಯ್ಯ [ಮೈಸೂರು ಖ್ಯಾತ ಪತ್ರಕರ್ತ] ಮತ್ತು ನಾರಾಯಣ ಶಾಸ್ತ್ರಿ ಮುಂತಾದ ಸಾಮಾಜಿಕ ಕೆಲಸಗಾರರ ಸಹಕಾರದಿಂದ ಇದು ಮಹಾರಾಣಿ ಕೆಂಪನಂಜಮ್ಮನ್ನಿಯ ಸಹಾಯಾರ್ಥವಾಗಿ ಬಾಲಕಿಯರಿಗೆ ಶೈಕ್ಷಣಿಕ ಸಂಸ್ಥೆಯನ್ನು 1881 ರ ಮಾರ್ಚ್ 16 ರಂದು ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗಗಳೊಂದಿಗೆ 28 ಬಾಲಕಿಯರ ಶಾಲೆ ಪ್ರಾರಂಭವಾಯಿತು.

1891 ರಲ್ಲಿ ಮೈಸೂರು ಸರ್ಕಾರವು ಈ ಶಾಲೆಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಹೈಸ್ಕೂಲಾಗಿ ಮಾರ್ಪಡಿಸಿತು. 1902 ರಲ್ಲಿ ಈ ಶಾಲೆಯು 11 ಗ್ರೇಡ್ ಕಾಲೇಜಾಗಿ ಮಹಾರಾಣಿ ಕಾಲೇಜ್ ಎಂಬ ಹೆಸರಿನೊಂದಿಗೆ ಮತ್ತೆ ನವೀಕರಿಸಲ್ಪಟ್ಟಿತು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿತು. 1919 ರವರೆಗೆ ಸಂಸ್ಥೆಯು ಕಾಲೇಜು, ಪ್ರೌಢಶಾಲೆ, ಮಧ್ಯ ಮತ್ತು ಪ್ರಾಥಮಿಕ ವಿಭಾಗಗಳನ್ನು ಒಟ್ಟಿಗೆ ಹೊಂದಿತ್ತು. 1920 ರಲ್ಲಿ ಮಹಾರಾಣಿ ಕಾಲೇಜ್ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿ ಉನ್ನತ ಶಿಕ್ಷಣ ಸಂಸ್ಥೆಯಾಯಿತು.

ಪ್ರಾಂಶುಪಾಲರ ಸಂದೇಶ

ನಮ್ಮ ಹೆಮ್ಮೆಯ ಮಹಾರಾಣಿ ಮಹಿಳಾ ಕಲಾ ಕಾಲೇಜು ಮೈಸೂರು ನಗರದ ಶೈಕ್ಷಣಿಕ ವಲಯದಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಕಾಳಜಿಯಿಂದ ಶ್ರಮಿಸುತ್ತಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. 1917ರಲ್ಲಿ ನಮ್ಮ ನಾಡಿನ ಪ್ರಸಿದ್ಧ ರಾಜಮನೆತನವಾದ ಮೈಸೂರು ಅರಸರಿಂದ ಪ್ರಾರಂಭವಾದ ಈ ಕಾಲೇಜು ಈಗ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಈ ನಮ್ಮ ಕಾಲೇಜು ಅನೇಕ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದ್ದು ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸ್ನಾತಕ ಕೇಂದ್ರದಲ್ಲಿ ಹದಿನಾರು ಐಚ್ಛಿಕ ವಿಷಯವಾರು ವಿಭಾಗಗಳು, ಇಪ್ಪತ್ತಾರು ಸಮೂಹಗಳು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ಅತ್ಯುನ್ನತ ವಿಭಾಗಗಳಿದ್ದು, ಎರಡೂ ಕೇಂದ್ರಗಳ ಎಲ್ಲಾ ವಿಭಾಗಗಳು ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಹ ಪೂರಕ ಪರಿಸರವನ್ನು ಹೊಂದಿವೆ. ಈ ಸಂಬಂಧ ವಿವಿಧ ರೀತಿಯ ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ವಿಚಾರ ಸಂಕಿರಣಗಳು ವರ್ಷದಾದ್ಯಂತ ಜರುಗುತ್ತಿರುತ್ತವೆ. ಇಂತಹ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗಾಗಿ ಇಲ್ಲಿನ ಪ್ರಾಂಶುಪಾಲರು, ಬೋಧಕ ವರ್ಗ, ಆಡಳಿತ ಸಿಬ್ಬಂದಿ ಮತ್ತು ಆಡಳಿತ ಅಭಿವೃದ್ಧಿ ಮಂಡಳಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.