ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು

ಝಾನ್ಸಿ ಲಕ್ಶ್ಮೀಬಾಯಿ ರಸ್ತೆ, ಮೈಸೂರು-570 005
ಪದವಿ ಮತ್ತು ಸ್ನಾತಕೋತ್ತರ ಕೇಂದ್ರ
NAAC 'B' ಗ್ರೇಡಿಂದ ಮಾನ್ಯತೆ ಪಡೆದಿದೆ

Maharani's Arts College For Women, Mysuru

J.L.B Road Mysuru 570 005
Undergraduate & Postgraduate Center
Accredited By NAAC 'B' Grade

Government of Karnataka

ಇತಿಹಾಸ

historyಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು ಇದನ್ನು ಮಹಾರಾಜ ಚಾಮರಾಜೇಂದ್ರ ಒಡೆಯರ್ X ನ ಪತ್ನಿ ಕೆಂಪನಂಜಮ್ಮಣಿಯವರಿಗಾಗಿ ಮಹಾರಾಣಿ ಹುಡುಗಿಯರ ಶಾಲೆಯನ್ನು ಮೈಸೂರಲ್ಲಿ ಪ್ರಾರಂಭಿಸಲಾಯಿತು. ಬಾಲಕಿಯರ ಶಿಕ್ಷಣವನ್ನು ನೀಡುವ ದೃಷ್ಟಿಕೋನದಿಂದ ಅಮ್ಬಲ್ ನರಸಿಂಹ ಅಯ್ಯಂಗಾರ್ (ಅರಮನೆಯ ಬಕ್ಷಿ), ಎಂ. ವೆಂಕಟ ಕೃಷ್ಣಯ್ಯ [ಮೈಸೂರು ಖ್ಯಾತ ಪತ್ರಕರ್ತ] ಮತ್ತು ನಾರಾಯಣ ಶಾಸ್ತ್ರಿ ಮುಂತಾದ ಸಾಮಾಜಿಕ ಕೆಲಸಗಾರರ ಸಹಕಾರದಿಂದ ಇದು ಮಹಾರಾಣಿ ಕೆಂಪನಂಜಮ್ಮನ್ನಿಯ ಸಹಾಯಾರ್ಥವಾಗಿ ಬಾಲಕಿಯರಿಗೆ ಶೈಕ್ಷಣಿಕ ಸಂಸ್ಥೆಯನ್ನು 1881 ರ ಮಾರ್ಚ್ 16 ರಂದು ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗಗಳೊಂದಿಗೆ 28 ಬಾಲಕಿಯರ ಶಾಲೆ ಪ್ರಾರಂಭವಾಯಿತು.

1891 ರಲ್ಲಿ, ಮೈಸೂರು ಸರ್ಕಾರವು ಈ ಶಾಲೆಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಹೈಸ್ಕೂಲಾಗಿ ಮಾರ್ಪಡಿಸಿತು. 1902 ರಲ್ಲಿ, ಈ ಶಾಲೆಯು ಈಈ ಗ್ರೇಡ್ ಕಾಲೇಜಾಗಿ ಮಹಾರಾಣಿ ಕಾಲೇಜ್ ಎಂಬ ಹೆಸರಿನೊಂದಿಗೆ ಮತ್ತೆ ನವೀಕರಿಸಲ್ಪಟ್ಟಿತು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿತು. 1919 ರವರೆಗೆ ಸಂಸ್ಥೆಯು ಕಾಲೇಜು, ಪ್ರೌಢಶಾಲೆ, ಮಧ್ಯ ಮತ್ತು ಪ್ರಾಥಮಿಕ ವಿಭಾಗಗಳನ್ನು ಒಟ್ಟಿಗೆ ಹೊಂದಿತ್ತು. 1920 ರಲ್ಲಿ ಮಹಾರಾಣಿಯ ಕಾಲೇಜ್ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿ ಉನ್ನತ ಶಿಕ್ಷಣ ಸಂಸ್ಥೆಯಾಯಿತು.

1979 ರಲ್ಲಿ ಮಹಾರಾಣಿ ಕಾಲೇಜು ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಕಲಾ ಕಾಲೇಜು ಎಂದು ಎರಡು ಪ್ರತ್ಯೇಕ ಕಾಲೇಜುಗಳಾಗಿ ವಿಭಜಿಸಲಾಯಿತು. 1993 ರಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಶಿಕ್ಷಣವನ್ನು ಪ್ರಾರಂಭಿಸಿತು ಆದರೆ ಬೆಳೆಯುತ್ತಿರುವ ವಿದ್ಯಾರ್ಥಿ ಸಂಖ್ಯೆಯ ಕಾರಣದಿಂದಾಗಿ ಕರ್ನಾಟಕ ಸರ್ಕಾರ ಮತ್ತೆ ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಹಾರಾಣಿಯ ಮಹಿಳಾ ವಾಣಿಜ್ಯ ಕಾಲೇಜನ್ನು ವಿಂಗಡಿಸಿತು. 2007 ರಲ್ಲಿ ಸ್ನಾತಕೋತ್ತರ ಕಾಲೇಜನ್ನು ಪ್ರಾರಂಭಿಸಿತು.

ಪ್ರಸ್ತುತ ನಮ್ಮ ಕಾಲೇಜು ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ವೃತ್ತಿಪರ ಓರಿಯಂಟೇಶನ್ ಕಾರ್ಯಕ್ರಮ ಒದಗಿಸುತ್ತದೆ.

ನಮ್ಮ ದೃಷ್ಟಿ

ಶೈಕ್ಷಣಿಕ ಘನತೆಯಿಂದ ಕೂಡಿದ ಬೋಧನೆ ಹಾಗೂ ಸಂಶೋಧನೆ ಉನ್ನತ ಸಾಧನೆಯ ಮೂಲಕ ಸಾಮಾಜಿಕ ನ್ಯಾಯದೊಂದಿಗೆ ಸಮಾಜದ ನಿರೀಕ್ಷೆಯಂತೆ ಮಹಿಳೆಯರನ್ನು ಸರ್ವರೀತಿಯಿಂದಲೂ ಸಬಲಗೊಳಿಸುವುದು. ಆ ಮೂಲಕ ದೇಶದಲ್ಲಿ ಮಹಿಳೆಯರನ್ನು ಸಬಲಗೊಳಿಸಿದ ಅತ್ಯುನ್ನತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು.

ನಮ್ಮ ಸೃಷ್ಟಿ

»   ಇಂದು ಉದ್ಭವಿಸುತ್ತಿರುವ ಸಮಾಜದ ಅಗತ್ಯಗಳನ್ನು ಪೂರೈಸುವಂಥ ಉನ್ನತ ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವುದು.
»   ವಿದ್ಯಾರ್ಥಿನಿಯರ ಸಾಧನೆ ಹಾಗೂ ಯಶಸ್ಸುನ್ನು ಹುರಿದುಂಬಿಸುವ ಮೂಲಕ ಅವರನ್ನು ಜೀವನ ಹಾಗೂ ನಾಯಕತ್ವಕೆ ಸಜ್ಜುಗೊಳಿಸುವುದು.
»   ವಿದ್ಯಾರ್ಥಿನಿಯರ ಹಾಗೂ ಅಧ್ಯಾಪಕರ ವೈಯಕ್ತಿಕ ಬೆಳವಣಿಗೆ ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವಂಥ ಸಂವೇದನಾಶೀಲವಾದ ಕಲಿಕೆ ಹಾಗೂ ವೀಶೇಷ ತಜ್ಞತೆಯ ವಾತಾವರಣವನ್ನು ಕಲ್ಪಿಸುವುದು.

ನಮ್ಮ ಗುರಿ

»   ಅತ್ಯಾಧುನಿಕ ಜ್ಞಾನಸ್ಫೋಟದಲ್ಲಿ ಭಾಗಿಯಾಗುವುದು.
»   ವಿದ್ಯಾರ್ಥಿನಿಯರಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸುವುದು.
»   ಆಧ್ಯಾತ್ಮಿಕ ಮೌಲ್ಯಗಳ ಮುಖಾಂತರ ವಿದ್ಯಾರ್ಥಿನಿಯರ ಆಂತರಿಕ ಸಾಮರ್ಥ್ಯವನ್ನು ಪ್ರಬಲೀಕರಣಗೊಳಿಸುವುದ.