ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು

ಝಾನ್ಸಿ ಲಕ್ಶ್ಮೀಬಾಯಿ ರಸ್ತೆ, ಮೈಸೂರು-570 005
ಪದವಿ ಮತ್ತು ಸ್ನಾತಕೋತ್ತರ ಕೇಂದ್ರ
NAAC 'B' ಗ್ರೇಡಿಂದ ಮಾನ್ಯತೆ ಪಡೆದಿದೆ

Maharani's Arts College For Women, Mysuru

J.L.B Road Mysuru 570 005
Undergraduate & Postgraduate Center
Accredited By NAAC 'B' Grade

Government of Karnataka

ಪ್ರಾಂಶುಪಾಲರ ಸಂದೇಶ

principalನಮ್ಮ ಹೆಮ್ಮೆಯ ಮಹಾರಾಣಿ ಮಹಿಳಾ ಕಲಾ ಕಾಲೇಜು ಮೈಸೂರು ನಗರದ ಶೈಕ್ಷಣಿಕ ವಲಯದಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಕಾಳಜಿಯಿಂದ ಶ್ರಮಿಸುತ್ತಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. 1917ರಲ್ಲಿ ನಮ್ಮ ನಾಡಿನ ಪ್ರಸಿದ್ಧ ರಾಜಮನೆತನವಾದ ಮೈಸೂರು ಅರಸರಿಂದ ಪ್ರಾರಂಭವಾದ ಈ ಕಾಲೇಜು ಈಗ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಈ ನಮ್ಮ ಕಾಲೇಜು ಅನೇಕ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದ್ದು ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸ್ನಾತಕ ಕೇಂದ್ರದಲ್ಲಿ ಹದಿನಾರು ಐಚ್ಛಿಕ ವಿಷಯವಾರು ವಿಭಾಗಗಳು, ಇಪ್ಪತ್ತಾರು ಸಮೂಹಗಳು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ಅತ್ಯುನ್ನತ ವಿಭಾಗಗಳಿದ್ದು, ಎರಡೂ ಕೇಂದ್ರಗಳ ಎಲ್ಲಾ ವಿಭಾಗಗಳು ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಹ ಪೂರಕ ಪರಿಸರವನ್ನು ಹೊಂದಿವೆ. ಈ ಸಂಬಂಧ ವಿವಿಧ ರೀತಿಯ ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ವಿಚಾರ ಸಂಕಿರಣಗಳು ವರ್ಷದಾದ್ಯಂತ ಜರುಗುತ್ತಿರುತ್ತವೆ. ಇಂತಹ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗಾಗಿ ಇಲ್ಲಿನ ಪ್ರಾಂಶುಪಾಲರು, ಬೋಧಕ ವರ್ಗ, ಆಡಳಿತ ಸಿಬ್ಬಂದಿ ಮತ್ತು ಆಡಳಿತ ಅಭಿವೃದ್ಧಿ ಮಂಡಳಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದಿಂದ ಅನುಷ್ಠಾನಗೊಂಡಿರುವ ಅನೇಕ ವಿದ್ಯಾರ್ಥಿಸ್ನೇಹಿ ಶೈಕ್ಷಣಿಕ ಯೋಜನೆಗಳು ನಮ್ಮ ಕಾಲೇಜಿನಲ್ಲಿ ಲಭ್ಯವಿದ್ದು ವಿದ್ಯಾರ್ಥಿನಿಯರು ಇವುಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ಸರ್ಕಾರೇತರ ಶೈಕ್ಷಣಿಕ ಸಂಸ್ಥೆಗಳು ಕೊಡಮಾಡುವ ಶಿಷ್ಯ ವೇತನಗಳು, ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವಲ್ಲಿ ನೆರವು ನೀಡುತ್ತಿವೆ. ವಿದ್ಯಾರ್ಥಿನಿಯರು ಶೈಕ್ಷಣಿಕ ಅಭಿವೃದ್ಧಿ ಹೊಂದುವಲ್ಲಿ ನಮ್ಮ ಕಾಲೇಜಿನ ಗೌರವಾನ್ವಿತ, ನುರಿತ, ಅನುಭವಿ ಬೋಧಕ ವರ್ಗದವರು ಉತ್ತಮ ಬೋಧನೆ, ಮಾರ್ಗದರ್ಶನ ಹಾಗೂ ನೆರವು ನೀಡುತ್ತಿದ್ದಾರೆ. ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯರ ದೈನಂದಿನ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡುತ್ತಿದ್ದಾರೆ. ಜೊತೆಗೆ ಕಾಲೇಜಿನ ವಸತಿ ನಿಲಯವು ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ.

ಕಾಲೇಜಿನ ಗ್ರಂಥಾಲಯವು ತಂತ್ರಜ್ಞಾನದ ನೆರವಿನಿಂದ ಸುವ್ಯವಸ್ಥಿತವಾಗಿ ಸಜ್ಜುಗೊಂಡಿದ್ದು, ಸುಮಾರು 70,000 ಪುಸ್ತಕಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಓದು, ಅಧ್ಯಯನ, ಪರಾಮರ್ಶನಕ್ಕೆ ಸೂಕ್ತ ಸೌಲಭ್ಯವನ್ನು ಒದಗಿಸುತ್ತಿದೆ. ಅಂತೆಯೇ ಕಾಲೇಜಿನ ವಾಚನಾಲಯ ವಿಭಾಗದಲ್ಲಿನ ವಿವಿಧ ಭಾಷೆಗಳ ಹತ್ತಾರು ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕ, ತ್ರೈಮಾಸಿಕ ನಿಯತಕಾಲಿಕೆಗಳು ದಿನನಿತ್ಯ ವಿದ್ಯಾರ್ಥಿಗಳು ತಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿವೆ.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯ ವಿಷಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ನಮ್ಮ ಕಾಲೇಜು ಉತ್ತಮ ‘ಸಾಂಸ್ಕøತಿಕ’ ಹಾಗೂ ‘ಅಭಿವ್ಯಕ್ತಿ ವೇದಿಕೆ’ ಗಳನ್ನು ಹೊಂದಿದೆ. ಈ ಎರಡೂ ವೇದಿಕೆಗಳು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರು ಚರ್ಚೆ, ಬರವಣಿಗೆ, ಗಾಯನ, ನೃತ್ಯ, ಅಭಿನಯ, ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅತ್ಯುತ್ತಮ ಅವಕಾಶಗಳನ್ನು ನಿರಂತರವಾಗಿ ಒದಗಿಸಿಕೊಡುತ್ತಿದೆ. ಕಾಲೇಜಿನಲ್ಲಿ ‘ಸ್ಪಂದನ’ ವಾರ್ಷಿಕ ಸಂಚಿಕೆಯು ಪ್ರತಿ ವರ್ಷವು ವಿದ್ಯಾರ್ಥಿಗಳ ಸೃಜನಶೀಲ ಚಿಂತನೆ, ಬರಹ, ಚಿತ್ರಕಲೆಗಳೊಂದಿಗೆ ವಿದ್ಯಾರ್ಥಿಗಳ ವೈವಿಧ್ಯಮಯ ಪಠ್ಯೇತರ ಚಟುವಟಿಕೆಗಳನ್ನು ಸಾಕ್ಷೀಕರಿಸುತ್ತಾ ಹೊರಹೊಮ್ಮುತ್ತಿದೆ.

ನಮ್ಮ ಕಾಲೇಜಿನಲ್ಲಿ ಅತ್ಯುತ್ತಮ ಕ್ರೀಡಾ ವಿಭಾಗವಿದ್ದು ವಿದ್ಯಾರ್ಥಿಯರ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಟ್ಟಿದೆ. ಇದರೊಂದಿಗೆ ವಿದ್ಯಾರ್ಥಿನಿಯರಲ್ಲಿ ಶಿಸ್ತುಬದ್ದ ನಡವಳಿಕೆ, ಸಾಮಾಜಿಕ ಅರಿವು, ಪರಿಸರ ಪ್ರಜ್ಞೆ, ವೈಚಾರಿಕತೆಯನ್ನು ಮೂಡಿಸುವಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‍ಕ್ರಾಸ್ ಘಟಕಗಳು ಹಾಗೂ ಇಛಿo ಕ್ಲಬ್ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ವರ್ಷ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಪ್ರೋತ್ಸಾಹಿಸುತ್ತಿವೆ.

ಕಾಲೇಜು ಈಗ ಇರುವ ಕೋರ್ಸ್‍ಗಳ ಜೊತೆಗೆ ಕೌಶಲ್ಯಭರಿತ, ವೃತ್ತಿನಿರತ ಆiಠಿಟomಚಿ ಹಾಗೂ ಅeಡಿಣiಜಿiಛಿಚಿಣe ಛಿouಡಿse ಗಳು ಮತ್ತು ಂಜಜ oಟಿ ಛಿouಡಿse ಗಳನ್ನು ಆರಂಭಿಸುವ ಯೋಜನೆ ಹೊಂದಿದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಕ್ಕಾಗಿ ನಮ್ಮ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಿರುವುದು ಅನಿವಾರ್ಯವಾಗಿದೆ. ಆದ್ದರಿಂದ ನಮ್ಮ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರದಲ್ಲಿ Sಠಿoಞeಟಿ ಇಟಿgಟish ಕಲಿಸಲಾಗುತ್ತಿದ್ದು, I.ಂ.S, ಏ.ಂ.S, I.ಇ.S, ಈಆಂ, Sಆಂ, ಃಚಿಟಿಞiಟಿg ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ.

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ಹಿತಚಿಂತನೆಯ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಸಾಕ್ಷರರನ್ನಾಗಿಸಲು ಕಂಪ್ಯೂಟರ್ ಪ್ರಯೋಗಾಲಯವನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನವೃದ್ಧಿಗಾಗಿ ಶೈಕ್ಷಣಿಕ ಪ್ರವಾಸಗಳು, ವಿಶೇಷ ಉಪನ್ಯಾಸಗಳು ಮತ್ತು ವಿಚಾರ ಸಂಕಿರಣಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳು ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಇಂತಹ ಅತ್ಯುತ್ತಮ ಜ್ಞಾನ ಹಾಗೂ ಸೃಜನಶೀಲತೆ ಹೊಂದಿರುವ ಕಾಲೇಜಿನಲ್ಲಿ ನಿಮ್ಮ ಭವ್ಯ ಭವಿಷ್ಯವು ಉಜ್ವಲಗೊಳ್ಳಲೆಂದು ಹಾರೈಸುತ್ತೇನೆ.

ಡಾ. ವಿಜಯ್.ಬಿ.ಟಿ
ಎಂ.ಎ, ಬಿ.ಇಡಿ, ಪಿಹೆಚ್.ಡಿ
ಪ್ರಾಂಶುಪಾಲರು